Wednesday, February 15, 2012

ಒಂದು ಮುತ್ತಿನ ಕತೆ


ನನ್ನ ಅಪ್ಸರೆಗೆಂದೇ
ಅರ್ಪಿಸಿದೆ
ಕಂಗೊಳಿಸುವ ಗುಲಾಬಿ ಹೂಗಳ
ಗೊಂಚಲೊಂದು

ಸವಿ ಮುತ್ತಿನ ಉತ್ತರಕ್ಕಾಗಿ
ಕಾಯುತ್ತಿದ್ದ ನನಗೆ
ನನ್ನವಳೆಂದಳು
"ಹೂವು ಚೆನ್ನ
ಆದರೆ ಚಿನ್ನವೆಲ್ಲಿ ನನ್ನ ಚಿನ್ನ,
ಮುತ್ತು ಬೇಕೆಂದರೆ
ತರಲಿಲ್ಲವೇಕೆ
ಒಂದಾದರು ಮುತ್ತು ರತ್ನ?"

ತಿಳಿಯಿತಾಗ, ಇದಲ್ಲಾ
ಪ್ರೇಮಿಗಳ ದಿನ
ಬದಲು ಪ್ರೇಮಿಗಳ
ಪರೀಕ್ಷಾ ದಿನ!
ಪೆಚ್ಚಾದ ಮೊಗದಲ್ಲಿ
ನಗುತ್ತಿತ್ತು ಕಿವಿಯಲ್ಲಿ
ಅವಳಿಟ್ಟ ಹೂವು!

ಹೊಸ ವರ್ಷದ ಹೊಸಿಲು ತುಳಿದು
ಮತ್ತೊಮ್ಮೆ ಬಂದಿದೆ ಸಂಕ್ರಾಂತಿ
ಈ ಬಾರಿಯಾದರೂ ಮಾಡೇ ಬಿಡುವಾ
some ಕ್ರಾಂತಿ ಎಂದೆನಿಸಿದೆ

ಸಂಭ್ರಮದ ಸುಗ್ಗಿ ಇಂದು
ಬಾಸುಮತಿ ಹುಗ್ಗಿ ತಿಂದು
ಐ.ಟಿ. ರೈತನಾದ ನಾನು
ಹಿತ್ತಲಲ್ಲಿ ಕೊತ್ತಂಬರಿ ಸೊಪ್ಪು
ಬೆಳೆದು ಬಿಡಲೇ?

ಹಿಮಾಲಯವನೇರಿದ ತೇನಸಿಂಗನೇ
ಸ್ಪೂರ್ತಿಯೆನಗೆ
ಕಾರು ಪಕ್ಕಕ್ಕಿಟ್ಟು
ಕಾಲ್ನಡಿಗೆಯಲ್ಲೇ
south mountain
ಏರಿ ಬಿಡಲೇ?

ಕ್ರಾಂತಿಕಾರಿ ಐಡಿಯಾಗಳು
ಹಲವಾರು
ಏನು ಮಾಡಿದರೇನು
ಭವ ಹಿಂಗದು
ದಾಸ ನಾನು
ಮಗನ ಮುಖಮಾರ್ಜನ
ಮನೆಯ ಒಪ್ಪ-ಓರಣ
ಮಾಡುವರೆಗೆ ಎಷ್ಟೇ ಹಿಗ್ಗಿದರೂ
ಹುಗ್ಗಿಯ ದರ್ಶನವಿಲ್ಲ

ಚಳಿ ಅಂತ ಸೂರ್ಯನೇ
ಬರ್ತಾನೆ ಲೇಟಾಗಿ
ಎದ್ದು ಮಾಡೋದೇನಿದೆ ಈಗ
ಅಂದ್ಳು ಹೆಂಡ್ತಿ ಲೈಟಾಗಿ
ಸಂಕ್ರಾಂತಿಯ ಕಾಂತಿ
ತಂದ ಈ ಮೆಸೇಜ್ ನಿಂದ
ಈಗ ಎಲ್ಲ ಕ್ಲಿಯರ್

ಓಂ ಶಾಂತಿ.. ಶಾಂತಿ.. ಶಾಂತಿ!